Monday, February 3, 2020

ಕ್ಯಾನ್ಸರ್ ತಡೆಗಟ್ಟಲು ಆದಷ್ಟು ಈ ಮಸಾಲೆ ಪದಾರ್ಥಗಳನ್ನು ಬಳಸಿ

ಭಾರತೀಯ ಸಾಂಪ್ರದಾಯಿಕ ಮಸಾಲ ಪದಾರ್ಥಗಳು ಪುರಾತನ ಕಾಲದಿಂದಲೂ ವಿಶೇಷ ಸ್ಥಾನವನ್ನು ಪಡೆದುಕೊಂಡಿವೆ. ಆಹಾರ ಪದಾರ್ಥಗಳ ಪರಿಮಳ ಮತ್ತು ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಅನೇಕ ಬಗೆಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತವೆ. ಅವುಗಳಲ್ಲಿ ಇರುವ ರೋಗ ನಿರೋಧಕ ಶಕ್ತಿ ಹಾಗೂ ಸೋಂಕು ನಿವಾರಕ ಗುಣಗಳು ಸಾಕಷ್ಟು ಅಪಾಯಕಾರಿ ರೋಗಗಳನ್ನು ಸಹ ಬುಡಸಮೇತ ಕಿತ್ತುಹಾಕುವುದು. ಇತ್ತೀಚೆಗೆ ಹೆಚ್ಚುತ್ತಿರುವಂತಹ ಮಾರಣಾಂತಿಕ ಕಾಯಿಲೆಗೆ ಮಸಾಲ ಪದಾರ್ಥಗಳು ಮಹತ್ತರವಾದ ಆರೈಕೆಯನ್ನು ಮಾಡುತ್ತವೆ. ಜೊತೆಗೆ ರೋಗಾಣುಗಳ ಕಣಗಳನ್ನು ದೇಹದಿಂದ ಹೊರತಳ್ಳುವುದು. ಇಷ್ಟೇ ಅಲ್ಲದೆ ದೇಹಕ್ಕೆ ಇತರ ಸೋಂಕು ತಗುಲದಂತೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಹಾಗಾದರೆ ಆ ಮಸಾಲ ಪದಾರ್ಥಗಳು ಅಥವಾ ಗಿಡಮೂಲಿಕೆಗಳು ಯಾವವು? ಎನ್ನುವುದನ್ನು ಪರಿಶೀಲಿಸೋಣ.

 

1. ಬೆಳ್ಳುಳ್ಳಿ:

ಗಡ್ಡೆಗಳ ರೂಪದಲ್ಲಿ ಇರುವ ತರಕಾರಿ ಬೆಳ್ಳುಳ್ಳಿ. ಬೆಳ್ಳುಳ್ಳಿ ತನ್ನದೇ ಆದ ಕಟು ವಾಸನೆಯನ್ನು ಪಡೆದುಕೊಂಡಿದೆ. ಇದನ್ನು ಕೆಲ ಮಸಾಲ ಪದಾರ್ಥಗಳೊಂದಿಗೆ ಸೇರಿಸಿ ಆಹಾರ ಪದಾರ್ಥಗಳನ್ನು ತಯಾರಿಸಿದರೆ ಅತ್ಯುತ್ತಮ ಪರಿಮಳ ಹಾಗೂ ರುಚಿಯನ್ನು ಪಡೆದುಕೊಳ್ಳಬಹುದು. ಬೆಳ್ಳುಳ್ಳಿಯನ್ನು ಪುರಾತನ ಕಾಲದಿಂದಲೂ ಔಷಧಗಳ ತಯಾರಿಕೆಯಲ್ಲಿ ಬಳಸಿಕೊಂಡು ಬರಲಾಗುತ್ತಿದೆ. ಬೆಳ್ಳುಳ್ಳಿಯಲ್ಲಿ ರೋಗನಿರೋಧಕ ಶಕ್ತಿ ಹಾಗೂ ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಸಹ ಒಳಗೊಂಡಿದೆ. ಕ್ಯಾನ್ಸರ್ ನಂತಹ ದೊಡ್ಡ ದೊಡ್ಡ ಆರೋಗ್ಯ ಸಮಸ್ಯೆಯಿಂದ ಹಿಡಿದು ಜ್ವರ ಮತ್ತು ನೆಗಡಿಯಂತಹ ಸಣ್ಣ ಪುಟ್ಟ ಕಾಯಿಲೆಗಳಿಗೂ ಸಹ ಉತ್ತಮ ಆರೈಕೆ ಮಾಡುವುದು. ಬೆಳ್ಳುಳ್ಳಿ ಮಿಶ್ರಿತ ಆಹಾರ ಪದಾರ್ಥಗಳ ಸೇವನೆ, ಬೆಳ್ಳುಳ್ಳಿ ಹಾಲು, ಬೆಳ್ಳುಳ್ಳಿ ಕಷಾಯಗಳನ್ನು ಸೇವಿಸಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅಧಿಕ ಪ್ರಮಾಣದ ಔಷಧೀಯ ಗುಣ ಹೊಂದಿರುವ ಬೆಳ್ಳುಳ್ಳಿಯನ್ನು ನಿತ್ಯ ಒಂದು ಎಸಳನ್ನು ಹಸಿಯಾಗಿಯೇ ತಿನ್ನುವುದು ಒಳ್ಳೆಯದು.

 

2. ಕೆಂಪು ಮೆಣಸಿನ ಕಾಯಿ:

ಕೆಂಪು ಮೆಣಸಿನಕಾಯಿ ರುಚಿಯಲ್ಲಿ ಖಾರವಾದರೂ ಅದರ ಪರಿಣಾಮ ಅಥವಾ ಬಳಕೆಯು ದೇಹಕ್ಕೆ ತಂಪನ್ನು ನೀಡುವುದು. ಕೆಂಪು ಮೆಣಸಿನ ಪುಡಿ ಅಥವಾ ಕೆಂಪು ಮೆಣಸಿನ ಕಾಯಿ ಆರೋಗ್ಯಕ್ಕೆ ಅತ್ಯುತ್ತಮವಾದದ್ದು. ಇದರ ಸೇವನೆಯಿಂದ ಚಯಾಪಚಯ ಕ್ರಿಯೆಯು ಸುಧಾರಣೆ ಕಾಣುವುದು. ಜೀರ್ಣ ಕ್ರಿಯೆ ಉತ್ತಮ ರೀತಿಯಲ್ಲಿ ನಡೆದಾಗ ಹಸಿವು ಸಹ ಸೂಕ್ತ ಸಮಯದಲ್ಲಿ ಉಂಟಾಗುವುದು. ಉತ್ತಮ ಜೀರ್ಣಕ್ರಿಯೆಯನ್ನು ಹೊಂದಿರುವ ವ್ಯಕ್ತಿ ಸಾಕಷ್ಟು ರೋಗಗಳಿಂದ ದೂರ ಇರುತ್ತಾನೆ. ಜೊತೆಗೆ ತೂಕವನ್ನು ಸಹ ಸಮತೋಲನದಲ್ಲಿ ಕಾಪಾಡಿಕೊಳ್ಳಬಹುದು ಎಂದು ವೈದ್ಯರು ಹೇಳುತ್ತಾರೆ. ಕೆಂಪು ಮೆಣಸಿನಲ್ಲಿ ಆಂಟಿಆಕ್ಸಿಡೆಂಟ್ ಗುಣಗಳು ಸಮೃದ್ಧವಾಗಿರುವುದರಿಂದ ರೋಗವನ್ನು ಉಂಟುಮಾಡುವ ಕಣಗಳನ್ನು ಅಥವಾ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವುದು. ಇದನ್ನು ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಸಬಹುದು. ಇದರ ಬಳಕೆಯಿಂದ ಅನೇಕ ರೋಗ ಗಳಿಂದ ದೂರ ಇರಬಹುದು. ಜೊತೆಗೆ ಆಹಾರ ಪದಾರ್ಥಗಳ ಬಣ್ಣ ಮತ್ತು ರುಚಿಯು ಉತ್ತಮವಾಗಿರುತ್ತದೆ.

 

3. ​ಶುಂಠಿ

 

ಶುಂಠಿಯು ಸಹ ಗಡ್ಡೆಯಂತಹ ತರಕಾರಿ. ಇದು ಸಹ ಉತ್ತಮ ರುಚಿ ಹಾಗೂ ಪರಿಮಳವನ್ನು ನೀಡುವ ಮಸಾಲ ಪದಾರ್ಥ. ಇದರ ಬಳಕೆಯಿಂದ ಸಕಷ್ಟು ಶ್ರೀಮಂತ ಆಹಾರ ಪದಾರ್ಥಗಳನ್ನು ಹಾಗೂ ಔಷಧಿಗಳನ್ನು ತಯಾರಿಸಲಾಗುವುದು. ಶುಂಠಿಯಲ್ಲಿ ಆಂಟಿಇಂಫ್ಲಾಮೆಟ್ರಿ/ ಉರಿಯೂತದ ಗುಣಗಳಿವೆ. ಹಾಗಾಗಿ ಸಾಮಾನ್ಯವಾದ ನೆಗಡಿ, ಜ್ವರ, ತಲೆನೋವು, ವಾಕರಿಕೆ, ವಾಂತಿ, ಸೋಂಕು ಜ್ವರ, ಸೋಂಕು ಮೂಗು ಸೋರಿಕೆ ಹೀಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ. ಇದನ್ನು ಆಹಾರದಲ್ಲಿ ಸೇರಿಸಿ ಸವಿಯುವುದು ಅಥವಾ ಕಷಾಯ ಮತ್ತು ಚಹಾ ರೂಪದಲ್ಲಿ ಕುಡಿದರೆ ಜೀರ್ಣಕ್ರಿಯೆಯು ಸುಧಾರಿಸುವುದು. ತೂಕ ಇಳಿಕೆಗೆ ಸಹಾಯಮಾಡುವುದು. ಜೊತೆಗೆ ಕ್ಯಾನ್ಸರ್ ನಂತಹ ಭಯಾನಕ ರೋಗ ಕಣಗಳನ್ನು ನಿಯಂತ್ರಿಸುತ್ತದೆ.

4. ​ಅರಿಶಿನ:

ಅರಿಶಿನ ಪುಡಿಯು ಆಹಾರ ಪದಾರ್ಥಗಳಿಗೆ, ಧಾರ್ಮಿಕ ವಿಧಿ-ವಿಧಾನಗಳಿಗೆ ಹಾಗೂ ಅನೇಕ ಔಷಧಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಅರಿಶಿನ ಬಣ್ಣದಲ್ಲಿ ಇರುವ ಈ ಮಸಾಲ ವಸ್ತು ಆಹಾರಗಳ ರುಚಿ ಮತ್ತು ಬಣ್ಣಗಳನ್ನು ಹೆಚ್ಚಿಸುತ್ತದೆ. ಜೊತೆಗೆ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ನೀಡುವುದು. ಗಡ್ಡೆಯಿಂದಲೇ ತಯಾರಿಸಲಾಗುವ ಈ ಅರಿಶಿನ ಪುಡಿಗಳು ನಮ್ಮ ದೇಹದಲ್ಲಿ ಮಾರಣಾಂತಿಕ ಕಾಯಿಲೆಯನ್ನು ಸೃಷ್ಟಿಸುವಂತಹ ಕ್ಯಾನ್ಸರ್ ರೋಗ ಕಣಗಳನ್ನು ಮತ್ತು ಕ್ಯಾನ್ಸರ್ ಗಡ್ಡೆಗಳನ್ನು ನಿವಾರಿಸುವಂತಹ ದಿವ್ಯ ಶಕ್ತಿಯನ್ನು ಪಡೆದುಕೊಂಡಿದೆ. ಆಂಟಿಇಂಫ್ಲಾಮೆಟ್ರಿ ಯ ಗುಣವನ್ನು ಹೊಂದಿರುವ ಅರಿಶಿನವು ಕ್ಯಾನ್ಸರ್ ಸೆಲ್‍ಗಳು ಬೆಳವಣಿಗೆ ಹೊಂದದೆ ಇರುವಂತೆ ತಡೆಯುತ್ತದೆ. ಅರಿಶಿನ ಸೇವನೆ ಮಾಡುವಾಗ ಆದಷ್ಟು ಕಾಳು ಮೆಣಸಿನ ಪುಡಿ ಅಥವಾ ಆಲಿವ್ ಎಣ್ಣೆಯ ಮಿಶ್ರಣದಲ್ಲಿ ಸೇವಿಸಬೇಕು. ಆಗ ಅರಿಶಿನದ ಶಕ್ತಿಯು ದ್ವಿಗುಣಗೊಳ್ಳುತ್ತದೆ. ಇದರಿಂದ ಅದ್ಭುತ ಆರೋಗ್ಯ ರಕ್ಷಣೆಯನ್ನು ಪಡೆದುಕೊಳ್ಳಬಹುದು.

 

5. ​ಕೇಸರಿ:

ಕೇಸರಿ ಎಳೆಯು ಅತ್ಯದ್ಭುತವಾದ ಅರಿಮಳ ಹಾಗೂ ರುಚಿಯನ್ನು ನೀಡುವ ಶ್ರೀಮಂತ ಹಾಗೂ ದುಬಾರಿಯಾದ ಮಸಾಲ ಪದಾರ್ಥ. ಇದನ್ನು ಬಳಸಿ ತಯಾಋಇಸಿದ ಪಾನೀಯ ಹಾಗೂ ಆಹಾರ ಪದಾರ್ಥಗಳು ಉತ್ತಮವಾದ ರುಚಿಯಿಂದ ಕೂಡಿರುತ್ತದೆ. ಹೂವಿನಿಂದ ತೆಗೆಯುವ ಕೇಸರಿ ಎಗಳು ಕ್ಯಾನ್ಸರ್ ನಂತಹ ಭಯಾನಕ ಕಾಯಿಲೆಯನ್ನು ತಡೆಯುವ ಹಾಗೂ ಅದರ ವಿರುದ್ಧ ಹೋರಾಡುವ ಶಕ್ತಿಯನ್ನು ಪಡೆದುಕೊಂಡಿದೆ. ಮಾನಸಿಕ ಒತ್ತಡ ಅಥವಾ ಕಿರಿ ಕಿರಿ ಉಂಟಾದರೆ ಕೇಸರಿ ಎಸಳನ್ನು ಮಿಶ್ರಗೊಳಿಸಿರುವ ಪಾನೀಯ ಅಥವಾ ಹಾಲನ್ನು ಸೇವಿಸಿದರೆ ಸಾಕು ಕೆಲ ಸಮಯದೊಳಗೆ ಮಾನಸಿಕವಾಗಿ ನಿರಾಳತೆ ಹಾಗೂ ಸಮಾಧಾನ ದೊರೆಯುವುದು. ದೇಹವನ್ನು ಬಿಸಿಯಾಗಿ ಇಡುವುದರ ಮೂಲಕ ಸೋಂಕು ಮತ್ತು ವಾತಾವರಣ ಬದಲಾವಣೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತವೆ.

 ​ಇತರ ಆಹಾರಗಳು.....

 ಮಸಾಲ ಪದಾರ್ಥಗಳಷ್ಟೇ ಔಷಧೀಯ ಗುಣಗಳಿಗೆ ಪ್ರಸಿದ್ಧಿಯನ್ನು ಪಡೆದುಕೊಂಡಿಲ್ಲ. ಕೆಲವು ಆರೋಗ್ಯಕರ ಹಣ್ಣು, ತರಕಾರಿ ಹಾಗೂ ಧಾನ್ಯಗಳು ಸಹ ಅತ್ಯುತ್ತಮ ಪೋಷಕಾಂಶಗಳನ್ನು ಹಾಗೂ ಔಷಧೀಯ ಗುಣಗಳನ್ನು ಪಡೆದುಕೊಂಡಿವೆ. ಹಾಗಾಗಿ ದಿನ ನಿತ್ಯದ ಆಹಾರದಲ್ಲಿ ನಾವು ಆದಷ್ಟು ತಾಜಾ ಹಣ್ಣು, ತರಕಾರಿ ಹಾಗೂ ಧಾನ್ಯಗಳನ್ನು ಬಳಸಬೇಕು. ಎಣ್ಣೆಯುಕ್ತ ಪದಾರ್ಥಗಳು, ಕುರುಕಲು ತಿಂಡಿ, ಕೃತಕ ಬಣ್ಣ ಹಾಗೂ ಪರಿಮಳವನ್ನು ಸೇರಿಸಿರುವ ಆಹಾರ ಪದಾರ್ಥಗಳು, ಸಂಸ್ಖರಿಸಿದ ಆಹಾರ ಮತ್ತು ಪಾನೀಯಗಳು ಮದ್ಯಪಾನ ಮತ್ತು ಧೂಮಪಾನಗಳಂತಹ ಕೆಟ್ಟ ಚಟಗಳು ಸಹ ನಮ್ಮ ಆರೋಗ್ಯವನ್ನು ಹಾಳುಮಾಡುತ್ತವೆ. ಅಲ್ಲದೆ ಕ್ಯಾನ್ಸರ್‍ನಂತಹ ಅಪಾಯಕಾರಿ ರೋಗದ ಸೃಷ್ಟಿಗೆ ಕಾರಣವಾಗುತ್ತವೆ. ಆದ್ದರಿಂದ ಆದಷ್ಟು ಉತ್ತಮ ಜೀವನ ಶೈಲಿ ಹಾಗೂ ಆಹಾರ ಕ್ರಮವನ್ನು ಅನುಸರಿಸಿ ಆರೋಗ್ಯದಿಂದ ಬಾಳುವುದು ಉತ್ತಮ.

 

  How to Earn Money....

 


 

 

 

 

 

 

Previous Post
Next Post
Related Posts

0 comments: