Monday, January 6, 2020

Online Scam

Online Scam: ಆನ್‌ಲೈನ್ ವಂಚನೆ, ಇರಲಿ ವಿವೇಚನೆ

ಆನ್‌ಲೈನ್‌ ಬ್ಯಾಂಕಿಂಗ್‌ ಕಾಲಮಾನದ ಅಗತ್ಯ. ಅದನ್ನು ನಿರಾಕರಿಸಲು ಸಾಧ್ಯವೇ ಇಲ್ಲ. ಆದರೆ, ಬಳಸುವ ಪ್ರತಿ ಹಂತದಲ್ಲೂಎಚ್ಚರ ವಹಿಸಬೇಕು. ಮೈಮರೆವು ಸಲ್ಲದು, ಮಾಹಿತಿ ಹಂಚಿಕೊಳ್ಳುವಾಗ ಹುಷಾರಾಗಿರಬೇಕು, ಮಾಹಿತಿ ಇಲ್ಲದೆ ವ್ಯವಹಾರ ನಡೆಸಬಾರದು ಎನ್ನುವುದು ಸೈಬರ್‌ ತಜ್ಞರ ಅಭಿಮತ. 

 ಹಲವು ಮಾದರಿಯಲ್ಲಿ ಸೈಬರ್‌ ಅಪರಾಧಗಳು ಜರುಗುತ್ತಿವೆ. ಆದರೆ, ಬ್ಯಾಂಕ್‌, ಕಾರ್ಡ್‌ ಸೇರಿ ಇನ್ನಿತರ ಯಾವುದೇ ಗೌಪ್ಯ ಮಾಹಿತಿಯನ್ನು ಮೌಖಿಕವಾಗಿ, ಮೆಸೇಜ್‌, ಆನ್‌ಲೈನ್‌ ಮೂಲಕ ಶೇರ್‌ ಮಾಡಿಕೊಳ್ಳದೇ ಇದ್ದರೇ ನಮ್ಮ ಹಣ ಕಳೆದುಕೊಳ್ಳುವ ಸಾಧ್ಯತೆ ಇರುವುದಿಲ್ಲ ಎಂದು ಹೇಳುವ ಮೂಲಕ ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಬಿ. ದಯಾನಂದ ಅವರು ಜನರ ಜಾಗೃತ ವ್ಯವಹಾರವೇ ಇದಕ್ಕೆಲ್ಲ ಮದ್ದು ಎಂಬ ಸಂದೇಶ ರವಾನಿಸಿದರು.


Online Scam: ಆನ್‌ಲೈನ್ ವಂಚನೆ, ಇರಲಿ ವಿವೇಚನೆ



ವಂಚನೆಗೆ ಒಳಗಾಗದಿರಲು ಮುನ್ನೆಚ್ಚರಿಕೆ


  • ಬ್ಯಾಂಕ್‌ ಖಾತೆ ವಿವರ, ಎಟಿಎಂ ಪಿನ್‌ ಯಾರ ಜತೆಗೂ ಹಂಚಿಕೊಳ್ಳಬೇಡಿ
  • ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಬಳಸುವಾಗ ಬಹಳ ಎಚ್ಚರದಿಂದಿರಿ
  • ಆಧಾರ್‌ ಮತ್ತು ಪ್ಯಾನ್‌ ವಿವರಗಳನ್ನು ನೀಡುವಾಗ ಜಾಗೃತೆ ಇರಲಿ
  • ಅಗಾಗ ಎಟಿಎಂ, ಆನ್‌ಲೈನ್‌ ಬ್ಯಾಂಕಿಂಗ್‌ ಪಾಸ್‌ವರ್ಡ್‌ ಬದಲಿಸಿ
  • ಮಾಲ್‌ಗಳಲ್ಲಿ ಡೆಬಿಟ್‌ ಕಾರ್ಡ್‌ ನಂಬರ್‌ ನೋಟ್‌ ಮಾಡದಂತೆ ಎಚ್ಚರ ವಹಿಸಿ
  • ಮಸಾಜ್‌, ಬಹುಮಾನ, ಲಾಟರಿ ಹೆಸರಿನಲ್ಲಿಬರುವ ಮೆಸೇಜ್‌ ಅಥವಾ ಲಿಂಕ್‌ಗಳನ್ನು ಓಪನ್‌ ಮಾಡಬೇಡಿ.
  • ಎಟಿಎಂನಲ್ಲಿಅನುಮಾನಾಸ್ಪದ ವಸ್ತು, ಉಪಕರಣಗಳು (ಸ್ಕಿಮ್ಮಿಂಗ್‌) ಕಂಡರೆ ಬ್ಯಾಂಕ್‌, ಪೊಲೀಸರಿಗೆ ಮಾಹಿತಿ ನೀಡಿ
  • ಇ ಕಾಮರ್ಸ್‌ ವಹಿವಾಟು ನಡೆಸುವಾಗ ವಿಚಾರಣೆ, ರಿಫಂಡ್‌ ಇದ್ದಾಗ ಅಧಿಕೃತ ವೆಬ್‌ಸೈಟ್‌ಗಳಲ್ಲಿರುವ ಫೋನ್‌ ಸಂಖ್ಯೆ, ಇ ಮೇಲ್‌ ಐಡಿಗೆ ಮಾತ್ರ ಕರೆ ಮಾಡಬೇಕು.
  • ಆಧಾರ್‌ ಕಾರ್ಡ್‌ ನೀಡುವಾಗ ಯಾವ ಉದ್ದೇಶಕ್ಕೆ ನೀಡಲಾಗಿದೆ ಎಂಬುದನ್ನು ಅದರ ಮೇಲೆ ಬರೆದು ಸಹಿ ಮಾಡಬೇಕು. 



Previous Post
Next Post
Related Posts

0 comments: